Celebrating Kannada Rajyotsava through classic poems

Posted by Asawari Ghatage on November 01, 2019

A former software professional, Rajani Muralidhar developed a keen interest in children's literature while reading to her own children over the last few years. The lack of contemporary original content in Kannada for children piqued her interest towards writing for her own children in Kannada.

ಸಾಫ್ಟ್ ವೇರ್ ವೃತ್ತಿಯಲ್ಲಿದ್ದ ರಜನಿ, ಕೆಲವು ವರ್ಷಗಳಿಂದ ಅವರ ಮಕ್ಕಳಿಗೆ ಕಥೆಗಳನ್ನು  ಓದುತ್ತಾ, ಮಕ್ಕಳ ಸಾಹಿತ್ಯದಲ್ಲಿ ಆಸಕ್ತರಾದರು. ಸಮಕಾಲೀನ ಮಕ್ಕಳ ಸಾಹಿತ್ಯದಲ್ಲಿ ಮೂಲತಃ ಕನ್ನಡ ಕೃತಿಗಳ ಲಭ್ಯತೆ ಕಡಿಮೆ ಇದ್ದ ಕಾರಣಕ್ಕೆ, ರಜನಿ ತನ್ನ ಮಕ್ಕಳಿಗಾಗಿ ಕನ್ನಡದಲ್ಲಿ ಬರೆಯಲಾರಂಭಿಸಿದರು.

In this bilingual blog post, Rajani writes about Dr. G.P. Rajarathnam, author, lyricist and poet from Karnataka and how his work inspired her to write poetry in Kannada. 


Kannada Rajyotsava, commonly known as Karnataka Formation Day, is a state public holiday observed annually on November 1st. On this day in 1956, the Kannada-speaking areas of South Western India combined to establish the state of Karnataka. It is a day to celebrate the rich and varied culture and heritage of this state.

Kannada Rajyotsava Celebration

In the whole state of Karnataka, Rajyotsava Day is observed with great jubilation and vigour. On this day, the red and yellow Kannada flags are raised at several key points around the state, and the Kannada national hymn ("Jaya Bharatha Jananiya Tanujate") is shouted, giving the entire state a joyful appearance. While youngsters in many places participate in processions in their automobiles, the flag is flown at political party headquarters and in some communities. The Rajyotsava is observed by Hindus, Muslims, and Christians alike regardless of religion.

There is no better day than this to remember Dr. G.P. Rajarathnam, author, lyricist, and poet from Karnataka, well-known for composing children’s poems.

Dr. G.P. Rajarathnam

The following was remarked about Rajarathnam by an Indian author, scholar, and translator Ambale Ramakrishna Krishnashastry – “With his forceful exposition, brilliant personality, a smiling face, and good conduct, the student following he has attained is something to be proud of. A teacher who earns the respect of his students is a puṇyavanta and his students are blessed. A teacher like Rajarathnam who could nurture and bring out the latent talent present in the students is indeed rare. The writings were written by his students which he has published under the title ‘ಕಾಲೇಜು ಬರವಣಿಗೆ’ (College Writings) bear testimony to this. Due to his untiring efforts, so many starlings became visible and shone even in the daylight.”

Kannada Rajyotsava Poems For Children

The beautifully written and easy-to-comprehend short Kannada poems by Dr. Rajarathnam are widely loved by children and serve as ideal Kannada Rajyotsava poems.

Dr. Nissar Ahmed, also an eminent author and poet in the Kannada language, once quoted, “Dr. Rajarathnam understood the minds of children and their needs. Some of his works have remained a challenge for translators even today". Such is the quality of Dr. G.P. Rajarathnam’s poetry.

A form of self-dissolution is necessary in order to comprehend and respond to the impressionable brains of youngsters. It requires a review of who we are from an objective, external viewpoint. Rajarathnam was partly destined to have this. Every child’s initiation to language in school begins with nursery rhymes. Similarly, initiation to Kannada in school always begins with one of Dr. Rajarathnam’s poems.

It is no unknown that the growth and development of a state are in the hands of its children who grow up to be future citizens. Therefore, it is crucial to inculcate in the minds of children, a feeling of pride and fondness for their cultural and lingual roots. Kannada Rajyotsava poems and Kannada Rajyotsava song lyrics by Dr. Rajarathnam are thus, the best options to start with!

Dr. Rajarathnam: A Gem of Kannada Poetry

Dr. Rajarathnam started writing poetry for children several decades ago by accident. The story goes that his father worked as a Kannada teacher in a school and was unwell for a few days. Dr. Rajarathnam had to work in his place as a substitute teacher for 2nd-grade children. He was appalled by the poems taught to small children in school. The same evening, he sat thinking after a walk near a lake at the foothills of Chamundi hills in Mysore and wrote his first story in the form of a poem ‘Bannada tagadina tutturi’. He introduced this poem to his students in school and it was an instant hit. Thrilled with its popularity, he also taught this poem to the children in his neighbourhood. He continued writing more short Kannada poems for the children. A publisher in his neighbourhood noticed his work and asked him to write a collection of children’s poems, which went on to be published as a book. Thus, began his journey as a writer.

Short Kannada Poems By Dr. Rajarathnam

Some of his popular poems are taught in schools even today:

  1. ‘Naayi Mari Naayi Mari’ – a delightful poem about feeding a little puppy

  2. ‘Ondu Eradu Baalele Haradu’ – a poem that teaches numbers starting from 1 to 10 while describing the art of eating a meal on a banana leaf

  3. ‘Bannada Tagadina Tutturi’ – a poetic story of boy who bragged about his colourful trumpet and eventually lost it

  4. ‘Hatthu Hatthu Ipatthu’ – a poem teaching the addition of numbers while narrating a story of a boy who tried to steal mangoes from an orchard

  5. ‘Namma Maneyalondu Sanna Paapa’ – a poem about the exploits of a little baby

  6. ‘Taata Butti Tumba Rotti’ – a short poem about a boy who ate tasty rotis that were not meant for him.

  7. ‘Kuriya Mari Byaa’ – a story of hunting down a tiger about to kill a little lamb

  8. ‘Kallu Sakkare’ – a short poem about the tasty candy sugar

The list goes on. In all, Dr. G.P. Rajarathnam wrote more than 100 poems for children. Apart from ‘Bannada Tagadina Tutturi’, my personal favourites are ‘Kuriya Mari Byaa’ and ‘Kallu Sakkare’ because of their natural rhythm and funny sounds in between that children love.

Kannada Rajyotsava Quotes

While going through the works of someone as versatile as Dr. Rajarathnam, it is natural to find lyrics or pieces of poetry that serve as ideal Kannada Rajyotsava Quotes. Dr. Rajarathnam has composed over 230 pieces of work with more than 300 publications under his pen name Bhramara, meaning “Bee”. Hence, you may rest assured that your child will not only enjoy reading his poems but will also take on some quotes from his work, that will stick with them for years.

When my daughter was 3 years old, I started reading English books to her extensively to keep her entertained and develop the habit of reading. After a few months, I noticed an unexpected fallout of this habit. She had stopped conversing in Kannada, her mother tongue. The more I tried, the less she spoke in Kannada. Dr. Rajarathnam’s poems came to my rescue. One day, she sang ‘Bannada Tagadina Tutturi’ in school after learning it from her older brother. The appreciation that she got in school opened the doors to her conversing in Kannada again. This made me realize the power of poetry as a tool for learning.

Inspired by Dr. G.P.Rajarathnam’s style of writing stories as poems, I started writing in Kannada for my children a couple of years ago and the first of my rhyme and rhythm stories is available in Story Weaver: ಅಚ್ಚುಮೆಚ್ಚಿನ ಸಂಗಾತಿ- A story about a little girl’s quest for a pet. You can read the English version of the story here.

A beautifully illustrated book of the short Kannada poems ‘Bannada Tagadina Tutturi’ and ‘Namma Maneyalondu Sanna Paapa’ written by G.P.Rajarathnam is available in StoryWeaver. You can read the book here.

A beautifully illustrated book of the poems ‘Bannada Tagadina Tutturi’ and ‘Namma Maneyalondu Sanna Paapa’ written by G.P.Rajarathnam is available in StoryWeaver. You can read the book here

There are several delightful poems beautifully written by other well-known Kannada poets that are illustrated and available on the site. Check these out to find the best Kannada Rajyotsava poems for yourself and your kids!

  1. Enchanting poems about phases of the moon and rainbow by Dr. Kuvempu:
    https://storyweaver.org.in/stories/43188-kuvempu-avara-chandra-mattu-kaamanabillu-kavanagalu

  2. Lovely poems that teach concepts of addition &subtraction and gravity by Smt. B K Tirumalamma
    https://storyweaver.org.in/stories/37633-b-k-tirumalamma-avara-haaru-beelu-kavanagalu

  3. Charming poem about a boy imagining a walking stick as his horse by Dr. Siddayya Puranik:
    https://storyweaver.org.in/stories/40394-dr-siddayya-puranik-avara-nanna-kudure

  4. The poem describes the destruction caused by storms in South India by Shri. Panje Mangesh Rao
    https://storyweaver.org.in/stories/43237-panje-mangesh-rao-avara-tenkana-gaaliyaata

Celebrate Kannada Rajyotsava by enjoying these classic Kannada poems with your little ones!


೧೯೫೬ರ ನವೆಂಬರ್ ಒಂದರಂದು ಕರ್ನಾಟಕ ರಾಜ್ಯವು ನಿರ್ಮಾಣವಾಯಿತು. ಇದರ ಸಂಕೇತವಾಗಿ ಪ್ರತಿವರ್ಷ ಈ ದಿನವನ್ನು  ಕನ್ನಡ ರಾಜ್ಯೋತ್ಸವವೆಂದು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯದ ವೈವಿಧ್ಯಮಯ ಹಾಗೂ ಸಮೃದ್ಧ ಸಂಸ್ಕೃತಿಯನ್ನು ಈ ದಿನ ಆಚರಿಸುತ್ತಾರೆ.

ಕನ್ನಡದ ಸುಪ್ರಸಿದ್ಧ ಸಾಹಿತಿ ಹಾಗೂ ಮಕ್ಕಳ ಕವಿತೆಗಳಿಗೆ ಖ್ಯಾತಿ ಪಡೆದ ಡಾ|| ಜಿ.ಪಿ.ರಾಜರತ್ನಂರವರನ್ನು  ನೆನಪಿಸಿಕೊಳ್ಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಖ್ಯಾತ ಸಾಹಿತಿ ಡಾ|| ನಿಸಾರ್ ಅಹ್ಮದ್ ಹೇಳಿದಂತೆ "ಡಾ|| ರಾಜರತ್ನಂ ಮಕ್ಕಳ ಮನಸ್ಸನ್ನು ಚೆನ್ನಾಗಿ ಅರಿತಿದ್ದಾರೆ. ಈಗಲೂ, ಅವರ ಕೃತಿಗಳನ್ನು ಭಾಷಾಂತರಿಸುವುದು ಅನುವಾದಕರಿಗೆ ಬಹಳ ಕಷ್ಟದ ಕೆಲಸ."

ಪುಟ್ಟ ಮಕ್ಕಳಿಗೆ ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಸಲು ಮೊದಲಿಗೆ ನರ್ಸರಿ ರೈಮ್ಗಳನ್ನು ಹೇಳಿಕೊಡುತ್ತಾರೆ. ಹಾಗೆಯೇ ಕನ್ನಡ ಭಾಷೆಯನ್ನು ಕಲಿಸಲು ಶಾಲೆಯಲ್ಲಿ ಮಕ್ಕಳಿಗೆ ಮೊದಲಾಗಿ ಡಾ|| ರಾಜರತ್ನಂರವರ ಶಿಶು ಪದ್ಯಗಳನ್ನು ಹೇಳಿಕೊಡುತ್ತಾರೆ.

ಮಕ್ಕಳಿಗಾಗಿ ಪದ್ಯಗಳನ್ನು ಬರೆಯಲು ರಾಜರತ್ನಂರವರು ಆಕಸ್ಮಿಕವಾಗಿ ಆರಂಭಿಸಿದರು. ರಾಜರತ್ನಂರವರ ತಂದೆ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಒಮ್ಮೆ ಅವರ ಆರೋಗ್ಯ ಕೆಟ್ಟಿದ್ದ ಕಾರಣಕ್ಕೆ ಅವರ ಸ್ಥಾನದಲ್ಲಿ ರಾಜರತ್ನಂರವರು ಎರಡನೇ ತರಗತಿಗೆ  ಪಾಠ ಮಾಡಲು ಹೋದರು. ಮಕ್ಕಳಿಗೆ ಹೇಳಿಕೊಡುತ್ತಿದ್ದ ಪದ್ಯಗಳನ್ನು ನೋಡಿ ಅವರಿಗೆ ಬೇಸರವಾಯಿತು. ಆ ದಿವಸದ ಕೆಲಸ ಮುಗಿದ ಮೇಲೆ ಸಾಯಂಕಾಲ ಚಾಮುಂಡಿಬೆಟ್ಟದ ತಪ್ಪಲಿನಲ್ಲಿದ್ದ ದೊಡ್ಡ ಕೆರೆಯನ್ನು ಒಂದು ಪ್ರದಕ್ಷಿಣೆ ಹಾಕಿ ಯೋಚಿಸುತ್ತಾ ಕುಳಿತರು. ಮಕ್ಕಳಿಗಾಗಿ 'ಬಣ್ಣದ ತಗಡಿನ ತುತ್ತೂರಿ' ಎಂಬ ಕವನದ ರಚನೆಯೂ ಅಲ್ಲಿಯೇ ಆಯಿತು. ಮರುದಿನ  ಶಾಲೆಯಲ್ಲಿ ಮಕ್ಕಳಿಗೆ ಈ ಪದ್ಯವನ್ನು ಹಾಡಲು ಹೇಳಿಕೊಟ್ಟರು. ಅವರ ಸಂತೋಷವನ್ನು ನೋಡಿ ಅಕ್ಕಪಕ್ಕದ ಮನೆಯಲ್ಲಿದ್ದ ಪುಟ್ಟ ಮಕ್ಕಳಿಗೂ ಪದ್ಯವನ್ನು ಹೇಳಿಕೊಟ್ಟರು. ಮಕ್ಕಳ ಉತ್ಸಾಹವನ್ನು ಕಂಡು ಅವರು ಇನ್ನಷ್ಟು ಪದ್ಯಗಳನ್ನು ಬರೆಯತೊಡಗಿದರು. ಎದುರು ಮನೆಯಲ್ಲಿದ್ದ ಪುಸ್ತಕ ವ್ಯಾಪಾರಿಯೊಬ್ಬ ಅವರಿಗೆ ಪುಸ್ತಕವೊಂದನ್ನು ಬರೆಯಲು ಪ್ರೋತ್ಸಾಹಿಸಿದರು. ಹೀಗೆ ಅವರ ಮೊದಲ ಕವನ ಸಂಕಲನದ ಪುಸ್ತಕವು ಪ್ರಕಟವಾಯಿತು ಹಾಗೂ ಅವರ ಲೇಖಕ ಜೀವನ ಆರಂಭವಾಯಿತು.

ಈಗಲೂ ಶಾಲೆಗಳಲ್ಲಿ ಹೇಳಿಕೊಡುವ ಅವರ ಪ್ರಸಿದ್ಧ ಕವನಗಳು ಇಂತಿವೆ:

೧. 'ನಾಯಿಮರಿ ನಾಯಿಮರಿ': ಪುಟ್ಟ ನಾಯಿಮರಿಯೊಂದಿಗೆ ಸಂಭಾಷಣೆ

೨.  'ಒಂದು ಎರಡು ಬಾಳೆಲೆ ಹರಡು': ಬಾಳೆಯೆಲೆ ಊಟದ ಜೊತೆ ಸಂಖ್ಯೆಗಳನ್ನು ಕಲಿಸುವ ಪದ್ಯ

೩.  'ಬಣ್ಣದ ತಗಡಿನ ತುತ್ತೂರಿ': ಜಂಬದ ಕೋಳಿ ಕಸ್ತೂರಿಯ ಕಥೆ

೪.  'ಹತ್ತು ಹತ್ತು ಇಪ್ಪತ್ತು': ಮಾವಿನ ಹಣ್ಣನ್ನು ಕದಿಯುವ ಕಥೆಯೊಂದಿಗೆ ಗಣಿತದ ಪಾಠ

೫. 'ನಮ್ಮ ಮನೆಯಲೊಂದು ಸಣ್ಣ ಪಾಪ': ಕೂಸಿನ ಗಲಾಟೆಯ ಪದ್ಯ

೬.  'ತಾತ ಬುಟ್ಟಿ ತುಂಬ ರೊಟ್ಟಿ': ಕಿಟ್ಟ ಮತ್ತು ತಾತನ ರೊಟ್ಟಿಯ ಕಥೆ

೭. 'ಕುರಿಯ ಮರಿ ಬ್ಯಾ': ಕುರಿಮರಿಯನ್ನು ಹಿಡಿಯಲು ಬಂದ ಹುಲಿಯ ಬೇಟೆಯ ಪದ್ಯ

೮.  'ಕಲ್ಲು ಸಕ್ಕರೆ': ಬಾಯಿಯಲ್ಲಿ ನೀರೂರಿಸುವ ಕಲ್ಲುಸಕ್ಕರೆಯ ಬಗ್ಗೆ ಕಿರುಪದ್ಯ

ಡಾ|| ರಾಜರತ್ನಂರವರು ಮಕ್ಕಳಿಗಾಗಿ ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.

'ಬಣ್ಣದ ತಗಡಿನ ತುತ್ತೂರಿ' ಅಲ್ಲದೆ, ನನಗೆ ಇಷ್ಟವಾದ ಕವನಗಳು 'ಕುರಿಯ ಮರಿ ಬ್ಯಾ' ಮತ್ತು 'ಕಲ್ಲುಸಕ್ಕರೆ'. ಈ ಕವನಗಳನ್ನು ತಾಳ ಹಾಕುತ್ತಾ ಹಾಡಬಹುದು ಹಾಗೂ ಕುಣಿಯಲೂ ಬಹುದು .

ನನ್ನ ಮಗಳಿಗೆ ಮೂರು ವರ್ಷಗಳಾಗಿದ್ದಾಗ ಓದುವ ಅಭ್ಯಾಸ ಮಾಡಿಸಲು ಆಂಗ್ಲ ಭಾಷೆಯಲ್ಲಿ ಅವಳಿಗೆ ಅನೇಕ ಪುಸ್ತಕಗಳನ್ನು ನಾನು ಓದುತ್ತಿದ್ದೆ. ಕೆಲವು ತಿಂಗಳುಗಳ ನಂತರ, ಅನಿರೀಕ್ಷಿತವಾಗಿ ಅವಳು ತನ್ನ ಮಾತೃಭಾಷೆಯಾದ ಕನ್ನಡವನ್ನು ಮಾತನಾಡುವುದನ್ನು ನಿಲ್ಲಿಸಿದಳು. ಆಗ ಡಾ|| ರಾಜರತ್ನಂರವರ ಕವನಗಳು ನನ್ನ ಸಹಾಯಕ್ಕೆ ಬಂದವು. ತನ್ನ ಅಣ್ಣನಿಂದ 'ಬಣ್ಣದ ತಗಡಿನ ತುತ್ತೂರಿ' ಕವನವನ್ನು ಕಲಿತು, ಅವಳು ಶಾಲೆಯಲ್ಲಿ ಹಾಡಿದಳು. ಎಲ್ಲರ ಮೆಚ್ಚುಗೆ ಪಡೆದಿದ್ದು ಅವಳಿಗೆ ಹುಮ್ಮಸ್ಸು ಕೊಟ್ಟಿತು ಹಾಗೂ ಅವಳು ಕನ್ನಡದಲ್ಲಿ ಮಾತನಾಡಲು ಪುನಃ ಶುರು ಮಾಡಿದಳು.

ಭಾಷೆಯನ್ನು ಕಲಿಯಲು ಕಾವ್ಯಗಳ ಮಹತ್ವ ನನಗೆ ಆ ದಿನ ತಿಳಿದುಬಂತು. ಡಾ|| ರಾಜರತ್ನಂರವರ ಕವನ ರೂಪದ ಕಥೆಗಳಿಂದ ಪ್ರೇರಿತಳಾಗಿ ನನ್ನ ಮಕ್ಕಳಿಗಾಗಿ ನಾನು ಪದ್ಯರೂಪದ ಕಥೆಗಳನ್ನು ಬರೆಯಲಾರಂಭಿಸಿದೆ. ನನ್ನ ಮೊದಲ ಕಥೆ ‘ಪ್ರಥಮ್ ಬುಕ್ಸ್’ರವರ 'ಸ್ಟೋರಿವೀವರ್'ನಲ್ಲಿ ಪ್ರಕಟವಾಗಿದೆ: ಅಚ್ಚುಮೆಚ್ಚಿನ ಸಂಗಾತಿ- ಪುಟ್ಟ ಹುಡುಗಿಯ ಸಂಗಾತಿಯಾಗುವುದು ಯಾವ ಪ್ರಾಣಿ?
https://storyweaver.org.in/stories/66886-the-perfect-companion 

'ಸ್ಟೋರಿವೀವರ್' ಸೈಟ್ನಲ್ಲಿ 'ಬಣ್ಣದ ತಗಡಿನ ತುತ್ತೂರಿ' ಹಾಗೂ ’ನಮ್ಮ ಮನೆಯಲೊಂದು ಸಣ್ಣ ಪಾಪ' ಪದ್ಯಗಳನ್ನು ಅದ್ಭುತವಾಗಿ ಚಿತ್ರಿಸಿರುವ ಪುಸ್ತಕವನ್ನು ಓದಬಹುದು. ಇದರ ಲಿಂಕ್ ಕೆಳಗಿದೆ: https://storyweaver.org.in/stories/37577-dr-g-p-rajaratnam-avara-paapa-mattu-peepi-kavanagalu 

ಸ್ಟೋರಿವೀವರ್' ಸೈಟ್ನಲ್ಲಿ ಅನೇಕ ಪ್ರಸಿದ್ಧ ಕವಿಗಳ ಸೊಗಸಾದ ಕವನಗಳನ್ನು ಓದಬಹುದು. 

೧. ಡಾ|| ಕುವೆಂಪು ಅವರ ಚಂದ್ರ ಮತ್ತು ಕಾಮನಬಿಲ್ಲುಗಳ ಕುರಿತು ಸುಂದರ ಕವನಗಳು
https://storyweaver.org.in/stories/43188-kuvempu-avara-chandra-mattu-kaamanabillu-kavanagalu 

೨. ಶ್ರೀಮತಿ ಬಿ.ಕೆ.ತಿರುಮಲಮ್ಮ ಅವರ ಗಣಿತ ಹಾಗೂ ಗುರುತ್ವಾಕರ್ಷಣೆಗಗಳ ಕುರಿತು ಮನೋಹರವಾದ  ಕವನಗಳು
https://storyweaver.org.in/stories/37633-b-k-tirumalamma-avara-haaru-beelu-kavanagalu 

೩. ಡಾ|| ಸಿದ್ಧಯ್ಯ ಪುರಾಣಿಕ ಅವರ ಕೈಕೋಲನ್ನು ಕುದುರೆಯಾಗಿ ಭಾವಿಸುವ ಮನಮೋಹಕ ಪದ್ಯ
https://storyweaver.org.in/stories/40394-dr-siddayya-puranik-avara-nanna-kudure 

೪. ಡಾ|| ಪಂಜೆ ಮಂಗೇಶರಾಯರ ತೆಂಕಣ ಗಾಳಿಯ ಆರ್ಭಟವನ್ನು ಕುರಿತ ಪದ್ಯ
https://storyweaver.org.in/stories/43237-panje-mangesh-rao-avara-tenkana-gaaliyaata 

ಈ ಮಹಾನ್ ಕವಿಗಳ ಶ್ರೇಷ್ಠ ಕವನಗಳನ್ನು ನಿಮ್ಮ ಮಕ್ಕಳಿಗೆ ಓದಿ(ಸಿ) ಕನ್ನಡ ರಾಜ್ಯೋತ್ಸವವನ್ನು ಆಚರಿಸಿ. ನಮಸ್ತೇ!


Do join the conversation by leaving your thoughts in the comments section below. You can also reach out to us through our social media channels: Facebook, Twitter and Instagram.

Be the first to comment.

Launching StoryWeaver Kannada: An exciting new YouTube channel!


 

ಸ್ಟೋರಿವೀವರ್, ಈ ಸಲದ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಆಚರಿಸುತ್ತಿದೆ. ನಮ್ಮ ರೀಡ್ ಅಲಾಂಗ್ಸ್ ಕತೆಯ ಪುಸ್ತಕಗಳಿಗೆ ದೊರೆತ ಉತ್ತೇಜನದಿಂದ ಪ್ರೇರಿತರಾಗಿ ಯೂಟ್ಯೂಬ್ ನಲ್ಲಿ ಚೆಂದದ  ವಿಡಿಯೋಗಳನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಸುಮಧುರ ಹಿನ್ನೆಲೆ ಸಂಗೀತ, ವೃತ್ತಿಪರ ಕಲಾವಿದರು ಓದಿರುವ, ಬಲು ಎಚ್ಚರಿಕೆಯಿಂದ ಹೆಣೆದ ಉಪಶೀರ್ಷಿಕೆಗಳಿಂದ ಜೀವಂತಿಕೆ ಪಡೆದ ಈ ಕಥಾ ವಿಡಿಯೋಗಳು ಮಕ್ಕಳನ್ನು ಆಕರ್ಷಿಸಿ ಓದುವ ಹವ್ಯಾಸಕ್ಕೆ ಹಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಈ ವಿಡಿಯೋಗಳು ಕತೆಗಳಿಗೆ ಜೀವ ಕೊಡುತ್ತವೆ ಮತ್ತು ಮಕ್ಕಳ ಓದುವ ಪ್ರೀತಿಯನ್ನು ಹೆಚ್ಚು ಮಾಡುತ್ತವೆ. ಈ ಎಲ್ಲಾ ಕತೆಗಳನ್ನು ಮಕ್ಕಳಿಗಾಗಿಯೇ ರಚಿಸಲಾಗಿದ್ದು, 1 ಮತ್ತು 2ನೇ ಹಂತದ ಮಕ್ಕಳಿಗಾಗಿ ಇವೆ. ಮಕ್ಕಳ ಗಮನವನ್ನು ಹಿಡಿದಿಟ್ಟುಕೊಳ್ಳುವಂತೆ ಇಲ್ಲಿಯ ವಿಡಿಯೋಗಳನ್ನು 5 ನಿಮಿಷದ ಕಾಲಮಿತಿಯಲ್ಲಿಯೇ ಇಡಲಾಗಿದೆ. ಸ್ಟೋರಿವೀವರ್ ಪುಟದಲ್ಲಿನ ರೀಡ್ ಅಲಾಂಗ್ ವಿಶೇಷತೆಯನ್ನೂ ಇದು ಒಳಗೊಂಡಿದ್ದು ವಿಶೇಷ ಕಾಳಜಿಯಿಂದ ಇಲ್ಲಿನ ಕತೆಗಳನ್ನು ಅರಿಸಿಕೊಳ್ಳಲಾಗಿದೆ. ಇಲ್ಲಿಯ ಶಬ್ದ ಮತ್ತು ಪದಗಳು ಪುನರಾವರ್ತಿತವಾಗುವಂತೆ ಉದ್ದೇಶಪೂರ್ವಕವಾಗಿ ನೋಡಿಕೊಳ್ಳಲಾಗಿದ್ದು, ಜೋರಾಗಿ ಓದಿ ಆನಂದಿಸುವಂತೆ ರಚಿಸಲಾಗಿದೆ. ಮನಸೆಳೆಯುವ ಬಣ್ಣದ ಚಿತ್ರಗಳು ಹಾಗೂ ಕತೆಗಳಲ್ಲಿನ ಸಾಕಷ್ಟು ನಾಟಕೀಯತೆ ಮಕ್ಕಳ ಮನ ಗೆಲ್ಲಲಿದೆ. 
 
ಯೂಟ್ಯೂಬ್‌ನಲ್ಲಿ ಸ್ಟೋರಿವೀವರ್ ನ ಕನ್ನಡ ಚಾನೆಲ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಪ್ರತಿವಾರ ಹೊಸ ವಿಡಿಯೋಗಳನ್ನು ನೋಡಿ ಖುಷಿಪಡಲು ಸಬ್ ಸ್ಕ್ರೈಬ್ ಮಾಡಿ!
 

ಸ್ಟೋರಿವೀವರ್‌ನೊಂದಿಗೆ ಕನ್ನಡ ಓದುವ ಖುಷಿಯನ್ನು ಸಂಭ್ರಮಿಸಿ!

 

comment (1)

Written by Hema, Editor- Kannada, Pratham Books

Who says math formulas are boring? Do you know how to recite a math concept through a wonderful story? Do you remember some funny things when your first teeth fell off? Have you ever witnessed a sunshower song? Who is Ahilyabai Holkar? On Kannada Rajyotsava, here are some amazing stories for you and your children. Read on to know more… 

ಆಡಾಡಿಕೊಂಡು ಕಲಿ, ಕೇಳು ಕೇಳುತ್ತಲೇ ತಿಳಿ 

1. Pishi and me - ನಾನು, ನನ್ನತ್ತೆ (Level 2)

https://storyweaver.org.in/stories/44731-naanu-nannatte

ಆಹ್, ಅತ್ತೆ ಎಷ್ಟು ಚೆಂದ. ನಾನು ಚಿಕ್ಕವಳಿದ್ದಾಗ ನನ್ನ ಚಿಕ್ಕತ್ತೆ ಹೈಸ್ಕೂಲಿನಲ್ಲಿ ಓದುತ್ತಿದ್ದರು. ನನ್ನ ಬಾಲ್ಯದ ನೆನಪುಗಳಲ್ಲಿ  ನನಗೆ ತುಂಬಾ ನೆನೆಪಿರುವ ಸಂಗತಿಗಳು ಎಂದರೆ ಅತ್ತೆಯ ಜೊತೆ ಊರಿನ ಬೀದಿಗಳಲ್ಲಿ ತಿರುಗಿದ್ದು ಮತ್ತು ಬೇರೆ ಬೇರೆ ಜನರನ್ನು ಭೇಟಿಯಾಗಿದ್ದು.  

ನಾನು, ನನ್ನತ್ತೆ ಕತೆಯ ಒಂದು ಚಿತ್ರ

ನನ್ನ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ನಾನು ಅತ್ತೆಯಾದೆ ಅಂದರೆ ಅಣ್ಣನಿಗೆ ಮಗುವಾಯಿತು. ನನಗೇ ಇನ್ನೂ ಅತ್ತೆಯ ಜೊತೆಗಿನ ನೆನಪುಗಳು ನಿನ್ನೆ ಮೊನ್ನೆ ಎನ್ನುವ ಹಾಗಿದ್ದಾಗ ನಾನು ಅತ್ತೆಯಾಗಿದ್ದೆ. ಎಷ್ಚು ಚೆಂದದ ಭಾವ. ಅಣ್ಣನ ಮಗಳು ನನ್ನ ಜೊತೆ ಬರುವಾಗಲೆಲ್ಲ, ನಾನು ಅತ್ತೆಯ ಜೊತೆ ಹೋಗುವಾಗ ಮಾಡುತ್ತಿದ್ದ ಕೀಟಲೆಗಳನ್ನೇ ಮಾಡುತ್ತಿದ್ದಳು.   ಇಡೀ ಕಥೆ ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತದೆ ಎನ್ನುವುದೇ ನನಗೆ ಸೋಜಿಗ ಮೂಡಿಸುತ್ತದೆ. ಅದಕ್ಕಾಗಿ ನಾವು ಮೂವರೂ ‘ನಾನು, ನನ್ನತ್ತೆ’ ಕಥೆಯನ್ನು ಪದೇ ಪದೇ ಓದುತ್ತೇವೆ. 

2. The Very Wiggly Tooth - ನಿಲ್ಲದ, ಬೀಳದ ಈ ಹಲ್ಲು! (Level 2)

https://storyweaver.org.in/stories/27656-nillada-beelada-ee-hallu

ಮನುಷ್ಯನಿಗೆ ಎರಡು ಹಂತದಲ್ಲಿ ಹಲ್ಲುಗಳು ಬರುತ್ತವೆ. ಮೊದಲನೆಯದು, ಎಳೆ ಹಲ್ಲು (ಹಾಲು ಹಲ್ಲು ಅಂತಾರೆ). ಇದು ಮಗುವಿನಲ್ಲಿ ಶುರುವಾಗಿ ಏಳೆಂಟು ವರ್ಷಗಳ ಹೊತ್ತಿಗೆ ಬಿದ್ದು ಹೋಗುತ್ತವೆ. ಹೀಗೆ ಬಿದ್ದ ಹಲ್ಲಿನ ಜಾಗದಲ್ಲಿ ಮೂಡುವ ಹಲ್ಲುಗಳನ್ನು ಶಾಶ್ವತ ಹಲ್ಲುಗಳೆನ್ನುತ್ತಾರೆ ಎನ್ನುತ್ತದೆ ವಿಜ್ಞಾನ. 

ಮಕ್ಕಳಿಗೆ ಮೊದಲು ಮೂಡುವುದು ಮುಂದಿನ ಮೇಲಿನ ಅಥವಾ ಕೆಳಗಿನ ಎರಡು ಹಲ್ಲುಗಳು. ಆ ಹಲ್ಲುಗಳೇ ಮಕ್ಕಳ ಮೊದಲ ಆಯುಧಗಳು ಎಂದರೂ ಅಡ್ಡಿಯಿಲ್ಲ. ಸ್ವಲ್ಪ ಚಂಡಿ ಹಿಡಿಯುವ ಮಕ್ಕಳಾದರೆ ಅವರ ಮೊದಲ ಕೆಲಸ ಸಿಕ್ಕಿದ್ದನ್ನೆಲ್ಲ ಕಚ್ಚುವುದು. ಹಾಲು ಹಲ್ಲುಗಳು ಬರುವುದು ನಿಂತ ಸ್ವಲ್ಪ ತಿಂಗಳುಗಳಿಗೆ ಅವು ಬೀಳುವ ಸುಗ್ಗಿ ಕೇಳಬೇಕೆ? ಪ್ರತಿ ಮಕ್ಕಳ ಹಾಲು ಹಲ್ಲು ಬೀಳುವುದು ಒಂದೊಂದು ಕಥೆ. ಅಂಥದ್ದೇ ಒಂದು ಕಥೆ ಇಲ್ಲಿ ಓದಲು ಸಿಗುತ್ತದೆ.

3. The Sunshower Song - ಬಿಸಿಲು ಮಳೆಯ ಹಾಡು (Level 3)

https://storyweaver.org.in/stories/41509-bisilu-maleya-haadu

ಜನರ ಮದುವೆಗಳಲ್ಲಿ ಆರ್ಕೆಸ್ಟ್ರಾ ನಡೆಸುವುದು ಸಾಮಾನ್ಯ ಸಂಗತಿ. ಅದೇ ರೀತಿ ಪ್ರಾಣಿಗಳ ಮದುವೆಯಲ್ಲೂ ಒಂದು ಸಂಗೀತ ಕಛೇರಿ ನಡೆಯುತ್ತದೆ. ಅದು ನರಿ ಜೋಡಿ ಮದುವೆ. ಆ ಮದುವೆಯಲ್ಲಿ ಸಂಗೀತದ ಮೋಡಿ. ಉಡುಗೊರೆ ಬದಲಿಗೆ ಅತಿಥಿಗಳೆಲ್ಲ ಶಬ್ದದ ಒಂದೊಂದು ತುಣುಕಿನೊಂದಿಗೆ ಮದುವೆಗೆ ಬರುತ್ತಾರೆ ಎನ್ನುವುದು ಎಷ್ಟು ಸುಂದರವಾದ ಕಲ್ಪನೆ. ಕೆಲವರು ತಾಳ, ಕೆಲವರು ಸ್ವರ ತರುವುದರ ಮೂಲಕ ಮದುವೆ ಭಾವಗೀತೆಯ ಮೇಳವಾಗುತ್ತದೆ. 

ಅಪ್ಪ ಅಮ್ಮನ ಮದುವೆಯ ಬಗ್ಗೆ ತಿಳಿದುಕೊಳ್ಳುವುದು ಬಹುತೇಕ ಮಕ್ಕಳಿಗೆ ಬಲು ಮೋಜಿನ ಸಂಗತಿ. ಮಕ್ಕಳಲ್ಲಿ ಇರುವಂತಹ ಕುತೂಹಲವೇ ಪ್ರಾಣಿಗಳಲ್ಲೂ ಇದೆ ಎನ್ನುವ ಯೋಚನೆಯೇ ಖುಷಿ ಕೊಡುವ ಸಂಗತಿ. ಮಳೆಗಾಲದ ಒಂದು ದಿನ ಸೂರ್ಯ ಇಣುಕಿದರೆ, ಸದ್ಯದಲ್ಲೇ ಏನಾಗಲಿದೆ ಎಂದು ಕಾಡಿನ ಪ್ರಾಣಿಗಳಿಗೆ ತಿಳಿಯುತ್ತದೆ. ಆದರೆ ಈ ಬಿಸಿಲು ಮಳೆಯ ಹಾಡಿನ ಜನಪ್ರಿಯ ದಂತಕತೆ ಸೃಷ್ಟಿಯಾಗಿದ್ದು ಹೇಗೆ ಅಂತ ನಿಮಗೇನಾದರೂ ಗೊತ್ತಾ?

4. Neelumbera on a Full Moon Night - ಬೆಳದಿಂಗಳ ಹೂ ನೀಲಂಬರ (Level 3)

https://storyweaver.org.in/stories/39012-beladingala-hoo-neelambara

ದಿನ ಮಾಡುವ ಕೆಲಸಗಳಿಂದಲೇ ಗಣಿತ ಕಲಿಯುವುದು. ಬೆಳೆಯುವ, ಕರಗುವ ಚಂದ್ರನನ್ನು ಗಮನಿಸುತ್ತ ಗಣಿತ ಮತ್ತು ಲ.ಸಾ.ಅ, ಮ.ಸಾ.ಅ ಕಲಿಯುವುದು ಎಷ್ಟು ಮೋಜಿನ ಕಲಿಕೆಯಲ್ಲವೇ? ಎಲ್ಲ ತರಗತಿಗಳಲ್ಲೂ ಗಣಿತ ಕಬ್ಬಿಣದ ಕಡಲೆ ಎಂದು ಅರಿವಾದಗಲೆಲ್ಲ ನಾನು ಅಂದುಕೊಂಡಿದ್ದು ಚಿತ್ರ ಮತ್ತು ಕತೆಯ ಮೂಲಕ ಗಣಿತ ಕಲಿಯುವುದಾದರೆ ಎಷ್ಟು ಚೆಂದ ಎಂತಲೇ. ಅದಕ್ಕೆ ಪೂರಕ ಎನ್ನುವಂತೆ ಬಂದ ಈ ಕತೆಯನ್ನು ಹಲವು ಸಲ ಗಣಿತದ ಮೋಜಿಗಾಗಿ ಓದಿದ್ದರೆ, ಹಲವು ಸಲ ಚಿತ್ರ ನೋಡುವುದಕ್ಕಾಗಿ ಓದಿದ್ದೇನೆ. 

ಬೆಳದಿಂಗಳ ಹೂ ನೀಲಂಬರ ಕತೆಯ ಒಂದು ಚಿತ್ರ

5. Ahilyabai Holkar - ಅಹಿಲ್ಯಾಬಾಯಿ ಹೋಳ್ಕರ್ (Level 4)

https://storyweaver.org.in/stories/29624-ahilyabai-holkar

ಭಾರತದ ಇತಿಹಾಸದಲ್ಲಿ ನಾವು ಕೇಳುವ ಬಹು ಮುಖ್ಯವಾದ ಹೆಣ್ಣುಮಕ್ಕಳ ಹೆಸರೆಂದರೆ, ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ. ಇಷ್ಟೇ ಪ್ರಮುಖವಾದ ಇನ್ನೊಂದು ಹೆಸರಿದೆ ಎಂದು ಗೊತ್ತಾಗುವುದು ಅಹಿಲ್ಯಾಬಾಯಿ ಹೋಳ್ಕರ್ ಕಥೆಯಿಂದ. ಅಖಂಡ 28 ವರ್ಷ ಅಹಿಲ್ಯಾಬಾಯಿ ಹೋಳ್ಕರ್ ಮಾಳ್ವ ರಾಜ್ಯವನ್ನು ಆಳಿದ ಕಾಲ ಇತಿಹಾಸದಲ್ಲಿ ಅಜರಾಮರವಾಗಿದೆ. ಅವಳ ಪ್ರಜಾಪ್ರೀತಿ ಇವತ್ತಿಗೂ ಅನುಕರಣೀಯ.
ಅವಳು ತನ್ನ ಪ್ರಜೆಗಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಳೆಂದರೆ ಆಕೆಯನ್ನು ಪುಣ್ಯಶ್ಲೋಕ ಅಹಿಲ್ಯಾಬಾಯಿ ಎಂದು ಕರೆಯುತ್ತಿದ್ದರು. ಅಂದರೆ, ಯಾವುದೇ ಲೋಪಗಳಿಲ್ಲದವಳು ಎಂದು ಅರ್ಥ. ತಮ್ಮ ‘ಡಿಸ್ಕವರಿ ಆಫ್ ಇಂಡಿಯ’ ಪುಸ್ತಕದಲ್ಲಿ ಪಂಡಿತ್ ಜವಹರ್‌ಲಾಲ್ ನೆಹರು ಅವರು, “ಅಹಿಲ್ಯಾಬಾಯಿಯ ರಾಜ್ಯಾಡಳಿತ ಕಾಲವು ಪ್ರಜೆಗಳಿಗೆ ಅತ್ಯಂತ ಸುಭಿಕ್ಷಾ ಕಾಲವಾಗಿತ್ತು. ಅಹಿಲ್ಯಾಬಾಯಿ ಅತ್ಯಂತ ದಕ್ಷ ಮತ್ತು ಸಮರ್ಥ ನಾಯಕಿ, ಸಂಘಟನಾ ಚತುರೆ ಆಗಿದ್ದಷ್ಟೇ ಅಲ್ಲದೇ ಅವಳ ಮರಣಾ ನಂತರ ಜನರು ಅವಳೊಬ್ಬ ದೇವತೆ ಎಂತಲೂ ಗೌರವಿಸತೊಡಗಿದರು,” ಎಂದು ಬರೆದಿದ್ದಾರೆ.


Do join the conversation by leaving your thoughts in the comments section below. You can also reach out to us through our social media channels: FacebookTwitter and Instagram.

Be the first to comment.