ಸ್ಟೋರಿವೀವರ್ ನಿಂದ ಕನ್ನಡ ಚಾನೆಲ್ ಪ್ರಾರಂಭ: ಆಕರ್ಷಕ ಹೊಸ ಯೂಟ್ಯೂಬ್ ಚಾನೆಲ್ !

Posted by Pallavi Kamath on November 01, 2020

Launching StoryWeaver Kannada: An exciting new YouTube channel!


 

ಸ್ಟೋರಿವೀವರ್, ಈ ಸಲದ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕ ಆಚರಿಸುತ್ತಿದೆ. ನಮ್ಮ ರೀಡ್ ಅಲಾಂಗ್ಸ್ ಕತೆಯ ಪುಸ್ತಕಗಳಿಗೆ ದೊರೆತ ಉತ್ತೇಜನದಿಂದ ಪ್ರೇರಿತರಾಗಿ ಯೂಟ್ಯೂಬ್ ನಲ್ಲಿ ಚೆಂದದ  ವಿಡಿಯೋಗಳನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಸುಮಧುರ ಹಿನ್ನೆಲೆ ಸಂಗೀತ, ವೃತ್ತಿಪರ ಕಲಾವಿದರು ಓದಿರುವ, ಬಲು ಎಚ್ಚರಿಕೆಯಿಂದ ಹೆಣೆದ ಉಪಶೀರ್ಷಿಕೆಗಳಿಂದ ಜೀವಂತಿಕೆ ಪಡೆದ ಈ ಕಥಾ ವಿಡಿಯೋಗಳು ಮಕ್ಕಳನ್ನು ಆಕರ್ಷಿಸಿ ಓದುವ ಹವ್ಯಾಸಕ್ಕೆ ಹಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಈ ವಿಡಿಯೋಗಳು ಕತೆಗಳಿಗೆ ಜೀವ ಕೊಡುತ್ತವೆ ಮತ್ತು ಮಕ್ಕಳ ಓದುವ ಪ್ರೀತಿಯನ್ನು ಹೆಚ್ಚು ಮಾಡುತ್ತವೆ. ಈ ಎಲ್ಲಾ ಕತೆಗಳನ್ನು ಮಕ್ಕಳಿಗಾಗಿಯೇ ರಚಿಸಲಾಗಿದ್ದು, 1 ಮತ್ತು 2ನೇ ಹಂತದ ಮಕ್ಕಳಿಗಾಗಿ ಇವೆ. ಮಕ್ಕಳ ಗಮನವನ್ನು ಹಿಡಿದಿಟ್ಟುಕೊಳ್ಳುವಂತೆ ಇಲ್ಲಿಯ ವಿಡಿಯೋಗಳನ್ನು 5 ನಿಮಿಷದ ಕಾಲಮಿತಿಯಲ್ಲಿಯೇ ಇಡಲಾಗಿದೆ. ಸ್ಟೋರಿವೀವರ್ ಪುಟದಲ್ಲಿನ ರೀಡ್ ಅಲಾಂಗ್ ವಿಶೇಷತೆಯನ್ನೂ ಇದು ಒಳಗೊಂಡಿದ್ದು ವಿಶೇಷ ಕಾಳಜಿಯಿಂದ ಇಲ್ಲಿನ ಕತೆಗಳನ್ನು ಅರಿಸಿಕೊಳ್ಳಲಾಗಿದೆ. ಇಲ್ಲಿಯ ಶಬ್ದ ಮತ್ತು ಪದಗಳು ಪುನರಾವರ್ತಿತವಾಗುವಂತೆ ಉದ್ದೇಶಪೂರ್ವಕವಾಗಿ ನೋಡಿಕೊಳ್ಳಲಾಗಿದ್ದು, ಜೋರಾಗಿ ಓದಿ ಆನಂದಿಸುವಂತೆ ರಚಿಸಲಾಗಿದೆ. ಮನಸೆಳೆಯುವ ಬಣ್ಣದ ಚಿತ್ರಗಳು ಹಾಗೂ ಕತೆಗಳಲ್ಲಿನ ಸಾಕಷ್ಟು ನಾಟಕೀಯತೆ ಮಕ್ಕಳ ಮನ ಗೆಲ್ಲಲಿದೆ. 
 
ಯೂಟ್ಯೂಬ್‌ನಲ್ಲಿ ಸ್ಟೋರಿವೀವರ್ ನ ಕನ್ನಡ ಚಾನೆಲ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಪ್ರತಿವಾರ ಹೊಸ ವಿಡಿಯೋಗಳನ್ನು ನೋಡಿ ಖುಷಿಪಡಲು ಸಬ್ ಸ್ಕ್ರೈಬ್ ಮಾಡಿ!
 

ಸ್ಟೋರಿವೀವರ್‌ನೊಂದಿಗೆ ಕನ್ನಡ ಓದುವ ಖುಷಿಯನ್ನು ಸಂಭ್ರಮಿಸಿ!

 



1 Comment

M R GANESHA KUMAR almost 4 years ago

ತುಂಬಾ ಸಂತೋಷದ ಸಂಗತಿ. ಯುಟ್ಯೂಬ್‌ ವಾಹಿನಿ ಯಶಸ್ವಿಯಾಗಲಿ. ಹೆಚ್ಚು ಹೆಚ್ಚು ಮಕ್ಕಳಿಗೆ ಕನ್ನಡ ಭಾಷೆಯ ಸವಿ ಲಭ್ಯವಾಗಲಿ.