sk profile foto-002.jpeg

Sushrut Kulkarni, has 20 years experience  in the field of computer networks and websites. He is a technical writer and translates and writes in Marathi, Hindi, English and German. He writes for various reputed publishers, newspapers, documentaries and radio.

One of the major technical hurdles for regional languages was fonts. That sphere was dominated by proprietary and non-standard fonts.

मराठी आणि अन्य भारतीय भाषांना कॉंप्युटरवर रुळायला बराच काळ जावा लागला. याचं मुख्य कारण म्हणजे फॉंट वापरण्यातले तांत्रिक (आणि आर्थिकही!) अडथळे होते. सुरुवातीला केवळ वृत्तपत्रं आणि प्रकाशनसंस्थांकडेच कॉंप्युटरवर मुद्रण या मुख्य उद्देशानं मराठी वापरलं जात असे. वेगवेगळ्या कंपन्यांनी तयार केलेले फॉंट वेगवेगळ्या प्रमाणांवर आधारित असल्यानं एका कॉम्प्युटरवर टाईप केलेलं दुसऱ्याला त्याच्या कॉम्प्युटरवर वाचणं अनेकदा शक्यच होत नसे. दरवेळी फॉंट बसवणं किंवा ते विकत घेणं शक्य नव्हतं. यामुळं प्रादेशिक भाषांमधलं लेखन इंटरनेटवर उपलब्ध व्हायलाही खूप वेळ लागू लागला.

यावर उपाय सापडला तो युनिकोडच्या (Unicodeच्या) रुपानं! युनिकोड ही जगातल्या कुठल्याही कॉम्प्युटरवर (किंवा मोबाईल फोनवर) वाचता येईल अशी एक लिहिण्याची पद्धत आहे. कॉम्प्युटर क्षेत्रातील काही कंपन्यांनी आणि तज्ज्ञांनी एकत्र येऊन ३ जानेवारी १९९१ रोजी युनिकोड कॉन्सर्टियमची स्थापना अमेरिकेत केली. या सर्वांनी मिळून फॉन्टसाठी एक विशिष्ट मानक (स्टॅंडर्ड) बनवलं. यापुढं फॉन्टस्‍चा जो विकास आहे तो या युनिकोड आधारावर होईल असं ठरवण्यात आलं. त्यामुळं कुठल्याही फॉन्टमध्ये जगातल्या अनेक भाषा सामावता येऊ लागल्या. आता बहुसंख्य युनिकोड फॉंट नि:शुल्क उपलब्ध असल्याने इंटरनेटवर इंग्रजीखेरीज अन्य भाषांमध्ये देवाणघेवाण मोठ्या प्रमाणावर शक्य झालेली आहे.

 

Be the first to comment.

ಬರಹ: ಹೇಮಾ ಡಿ.ಖುರ್ಸಾಪುರ

Posted by Remya Padmadas on September 30, 2017

September 30th is celebrated around the world as International Translation Day. We're very fortunate that some of our wonderful translators and language reviewers shared their thoughts on translation and children's books with us on this occasion.

 

Picture1.png

 A travel freak who enjoys playing with words, Hema D Khursapur interests are movies, spirituality, Kannada, Hindi, Persian languages but not limited to them. She is a contemporary writer whose words were always a magic for language lovers.

In this blog post, she writes about  what it means to imagine a story and then deliver it.

ಅನುವಾದ ಭಾವಾನುವಾದರೆ ಸಾರ್ಥಕ

ನರಭಕ್ಷಕ ಚಿರತೆ, ಹುಲಿ ಬೇಟೆ, ಶಿಕಾರಿ ಕುರಿತಾಗಿ ಕೆನೆತ್ ಆಂಡರ್‌ಸನ್ ಅವರು ಇಂಗ್ಲಿಷ್‌ನಲ್ಲಿ ಬರೆದ ಕತೆಗಳನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ‘ಕಾಡಿನ ಕತೆಗಳು’ ಎಂದು ಭಾವಾನುವಾದ ಮಾಡಿದ್ದಾರೆ. ಅದು ಅನುವಾದವಾಗದೆ ಭಾವಾನುವಾದ ಆದದ್ದು ಹೇಗೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ.‘‘ ನಾನು ಹುಟ್ಟುವ ವೇಳೆಗಾಗಲೇ ಈ ಶಿಕಾರಿ ಯುಗದ ಕೊಟ್ಟ ಕೊನೆಯ ತುದಿ ಬಂದಿತ್ತು. ಆದರೂ ಈ ಕತೆಗಳನ್ನು ಅನುಭವಿಸಿ ಆಸ್ವಾದಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳ ಪರಿಚಯವಾಯ್ತು. ಕೆನೆತ್ ಆಂಡರ್‌ಸನ್ನರ ಕತೆಗಳ ಹಿನ್ನೆಲೆ ಪರಿಸರ, ಪಾತ್ರಗಳು ಎಲ್ಲ ನನಗೆ ನನ್ನ ಅನುಭವವೇ ಎನ್ನುವಷ್ಟು ಚಿರಪರಿಚಯ. ಚೋರ್ಡಿ. ಬೆಳ್ಳಂದೂರ, ಪಿಕಾರಿಪುರ, ಶೆಟ್ಟಿಹಳ್ಳಿ ನಾವು ಓಡಾಡಿದ, ಆ ಕಾಡುಗಳಲ್ಲಿ ಲಾಟರಿ ಹೊಡೆದ ಜಾಗಗಳು. ನಾವು ಕಾಡು ತಿರುಗಲಾರಂಭಿಸಿದಾಗ ನರಭಕ್ಷಕಗಳ ಯುಗ ಮುಗಿದಿತ್ತೆನ್ನುವುದೊಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ನಾನೇ ಆಂಡರ್‌ಸನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.

ತರ್ಜುಮೆ ಮಾಡ ಹೋದಾಗ ಇದರಿಂದ ನನಗಾದ ತೊಂದರೆ ಎಂದರೆ ಆಂಡರ್‌ಸನ್ನರ ಹೆಸರಿನಲ್ಲಿ ನನ್ನ ಅನುಭವಗಳು, ವಿವರಗಳು ಸೇರತೊಡಗಿದವು. ಹೀಗಾದ್ದರಿಂದಲೇ ಈ ತರ್ಜುಮೆಗಳನ್ನು ಭಾವಾನುವಾದ ಎಂದ ಕರೆಯಬೇಕಾದ ಅನಿವಾರ್ಯತೆ ಉಂಟಾಯ್ತು. ಈ ಕಥೆಗಳಲ್ಲಿ ಆಂಡರ್‌ಸನ್ನರ ಮೂಲಕಥೆಗಳ ಅಂತಃಸ್ಸತ್ವಕ್ಕೆ ತಿಲಮಾತ್ರವೂ ಚ್ಯುತಿ ಬರದಹಾಗೆ ಇಲ್ಲಿ ಪ್ರತಿನಿಧಿಸಿದ್ದೇನೆನ್ನುವುದೊಂದೇ ನನಗೆ ಸಮಾಧಾನದ ವಿಷಯ. ಮಕ್ಕೀಕಾಮಕ್ಕಿ ತರ್ಜುಮೆಗಿಂತ ಈ ರೀತಿ ಆಂಡರ್‌ಸನ್ನ ರನ್ನು ಪ್ರತಿನಿಧಿಸುವುದೇ ಆಂಡರ್‌ಸನ್ನರಿಗೆ ಹೆಚ್ಚು ನ್ಯಾಯ ದೊರಕಿಸಿದಂತೆ ಎಂದು ನಾನು ತಿಳಿದಿದ್ದೇನೆ,’’ ಎಂದು.

ಮೇಲಿನ ಸಾಲುಗಳನ್ನು ಓದುವಾಗ ಅನುವಾದ ಮೂಲ ಕೃತಿ ರಚನೆಗಿಂತ ಸೃಜನಶೀಲವಾದದ್ದು ಎಂದು ಅರ್ಥವಾಗುತ್ತದೆ. ಇದು ನನಗೆ ಅರ್ಥವಾಗಿದ್ದು, ದಿನಪತ್ರಿಕೆಯೊಂದರ ಸಾಪ್ತಾಹಿಕಕ್ಕೆ ಮಕ್ಕಳಿಗಾಗಿ ಪುಟವೊಂದನ್ನು ನಿರ್ವಹಿಸುತ್ತಿದಾಗ. ಮೊಸಳೆ ಕುರಿತಾದ ಅನುವಾದ ಭಾವಾನುವಾದದ್ದು ಅದರಲ್ಲಿ ಬಾಲ್ಯದ ನನ್ನ ಅನುಭವವೂ ಸೇರಿದ್ದರಿಂದ. 'Why crocodiles are best parents in the world'

ಭಾಗವನ್ನು ಅನುವಾದಿಸುವಾಗ ಚಿಕ್ಕಂದಿನಲ್ಲಿ ನದಿ ತೀರದಲ್ಲಿ ಅಸಹ್ಯವಾಗಿ ಬಾಯಿ ತೆರೆದು ಬಿದ್ದಿರುತ್ತಿದ್ದ ಮೊಸಳೆಗಳನ್ನು ದಿನವೂ ನೋಡುತ್ತಿದ್ದ ನನಗೆ ಅವುಗಳ ಬಗ್ಗೆ ಅಷ್ಟೇನೂ ಅಪ್ತತೆ ಇರಲಿಲ್ಲ. ಆದರೆ ಅವು ತಮ್ಮ ಮರಿಗಳಿಗೆ ಸ್ನಾನ ಮಾಡಿಸುವುದನ್ನು ನೋಡಿದಾಗ ಆವತ್ತಿಗೆ ನನ್ನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವಿರಲಿಲ್ಲ. ಆ ಘಟನೆಯ ನಂತರ ಇಪ್ಪತ್ತು ವರ್ಷಗಳ ನಂತರ ನಾನು, ‘‘ಮೊಸಳೆಗಳು ಜಗತ್ತಿನ ಶ್ರೇಷ್ಠ ಅಪ್ಪ-ಅಮ್ಮ’’ ಬರಹದಲ್ಲಿ ಅವನ್ನು ಬರೆದಿದ್ದು ಹೀಗೆ. "ಮಕ್ಕಳು ದೊಡ್ಡ ತಪ್ಪು ಮಾಡಿ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣೀರು ಸುರಿಸುತ್ತಾ ಅಪ್ಪ-ಅಮ್ಮ ನಮ್ಮನ್ನು ಹೊಡೆಯದಿದ್ದರೆ ಸಾಕು ಎಂದು ಗದರುವು ಮುನ್ನವೇ ಗೋಳೋ ಎನ್ನುತ್ತಿದ್ದರೆ, ಪ್ರತಿ ತಂದೆ-ತಾಯಿ ಜೀವಮಾನದಲ್ಲಿ ಒಮ್ಮೆಯಾದರೂ ಇಂತಹ ಮಕ್ಕಳಿಗೆ ಬೈದಿರುತ್ತಾರೆ ಸಾಕು ನಿಲ್ಲಿಸು ನಿನ್ನ ಈ ಮೊಸಳೆ ಕಣ್ಣೀರನ್ನು ಎಂದು. ಅಂದರೆ  ಮೊಸಳೆ ಕಣ್ಣೀರು ಸುರಿಸುವುದು ನೋವಿನಿಂದ, ಬೇಜಾರಿನಿಂದ ಅಲ್ಲ. ಮೊಸಳೆಯ ಭಾವನೆಗಳಿಗೂ ಕಣ್ಣೀರಿಗೂ ಸಂಬಂಧವಿಲ್ಲ. ಆದರೂ ‘ಮೊಸಳೆ ಕಣ್ಣೀರು’ ನುಡಿಗಟ್ಟಾಗಿ ಬಳಕೆಯಲ್ಲಿದೆ. ಮೊಸಳೆಗಳು ಬಹುಕಾಲ ನೀರಿನಿಂದ ಮೇಲೆ ಇದ್ದಾಗ ಕಣ್ಣೀರು ಹಾಕುತ್ತವೆ. ಕಣ್ಣ ಪಾಪೆಗಳು ಒಣಗದಂತೆ ಮಾಡಲು ಗ್ರಂಥಿಗಳು ನೀರನ್ನು ಸುರಿಸುತ್ತವೆ ಮತ್ತು ನೀರಿನಿಂದ ಹೊರಗಿದ್ದಾಗ ಆಹಾರ ತಿನ್ನುವಾಗಲೂ ಮೊಸಳೆ ಕಣ್ಣುಗಳಿಂದ ನೀರು ಸುರಿಯುತ್ತದೆ. ಇದಕ್ಕೆ ಕಣ್ಣಿನ ರಕ್ಷಣೆ, ಆಹಾರ ಸೇವಿಸುವಾಗ ಉಂಟಾಗುವ ಒತ್ತಡ ಮೊದಲಾದವು ಕಾರಣಗಳಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಎಲ್ಲ ಮೊಸಳೆಗಳು ಒಂದು ರೀತಿ ಅಡಾವುಡಿ ಮಾಡಿ ಸುಳ್ಳೇ ಸುಳ್ಳು ಕಣ್ಣೀರು ಸುರಿಸುವ ಮಕ್ಕಳಂತಾದರೆ, ತಮ್ಮ-ತಮ್ಮ ಮಕ್ಕಳು ವಿಷಯದಲ್ಲಿ ಅಪ್ಪ-ಅಮ್ಮ ಮೊಸಳೆಗಳು ಮಾತ್ರ ತುಂಬಾ ಅಂದ್ರೆ ತುಂಬಾ ಒಳ್ಳೆಯವು. ಮೊಸಳೆಗಳು ನೋಡಲು ಭಯಾನಕವಾಗಿದ್ದರೂ ತಮ್ಮ ಮಕ್ಕಳ ಜತೆ ತುಂಬಾ ಶಾಂತ ರೀತಿಯಿಂದ ವರ್ತಿಸುತ್ತವೆ. ಮಕ್ಕಳು ಸ್ನಾನ ಮಾಡಿಸುವಾಗ ವಿಪರೀತ ಹಠ ಮಾಡುತ್ತವೆ ಎಂದು ಬೈಯ್ದುಕೊಳ್ಳುವ ಅಮ್ಮಂದಿರು ತಾಯಿ ಮೊಸಳೆಯಿಂದ ನೋಡಿ ಕಲಿಯಬೇಕಾದದ್ದು ತುಂಬಾ ಇದೆ ಎನಿಸುತ್ತದೆ. ಮರಿ ಮೊಸಳೆಗಳು ಮರಳಿನಲ್ಲಿ, ಜೌಗಿನಲ್ಲಿ ಆಟವಾಡಿ ಮೈಯ್ಯೆಲ್ಲಾ ಕೆಸರು ಆಡಿಕೊಂಡರೆ ತಾಯಿ ಮೊಸಳೆ ಚೂರೂ ಬೈಯ್ಯದೇ ಅವುಗಳನ್ನೆಲ್ಲ ಬಾಯಿಯಲ್ಲಿ ತೆಗೆದುಕೊಂಡು (ಒಂದು ಸಲಕ್ಕೆ ಕನಿಷ್ಟ ೧೮ ರಿಂದ ೨೦ ಮರಿಗಳನ್ನು ಒಟ್ಟಿಗೆ) ನದಿಗೆ ಸ್ನಾನ ಮಾಡಿಸಲು ತೆಗೆದುಕೊಂಡು ಹೋಗುತ್ತದೆ. ಹರಿವ ನೀರಿನ ಸಮೀಪ ನಿಂತು ಬಾಯಿ ತೆರೆದು ನಿಧಾನವಾಗಿ ಮರಿಗಳ ತಲೆ ಮೊದಲು ನೀರಿನಲ್ಲಿ ಬೀಳುವಂತೆ ಬಿಡುತ್ತದೆ. ಮರಿಗಳ ಉರುಟು ಮೈಮೇಲಿನ ಮರಳು ಹೋಗುವವರೆಗೆ ಸ್ನಾನ ಮಾಡಿಸುತ್ತದೆ. ಗಂಡು ಮೊಸಳೆಯೂ ಮಕ್ಕಳ ವಿಷಯದಲ್ಲಿ ತುಂಬಾ ನಿಧಾನವಾಗಿ, ಸೂಕ್ಷ್ಮವಾಗಿ ವರ್ತಿಸುತ್ತದೆ. ಮೊಟ್ಟೆಗಳು ಒಡೆದು ಮರಿ ಹೊರ ಬರುವಾಗ ಮೊಟ್ಟೆ ಒಡೆಯಲು ಸಹಾಯ ಮಾಡಿ ಮರಿಗಳಿಗೆ ಗಾಯವಾಗದಂತೆ ನೋಡಿಕೊಳ್ಳುತ್ತದೆ. ಮರಿಗಳಿಗೆ ನೋವಾಗದಂತೆ ತಂದೆ ಮೊಸಳೆ ವಹಿಸುವ ಕಾಳಜಿಯನ್ನು ನೋಡಿದರೆ ಎಂಥವರೂ ತಲೆದೂಗುತ್ತಾರೆ," ಎಂದು. ಹೀಗೆ ಅನುವಾದ ಭಾನುವಾದ ಕ್ಷಣ ನಿಜಕ್ಕೂ ಸಾರ್ಥಕ ಎನಿಸುತ್ತದೆ.


 

 

 

Be the first to comment.

September 30th is celebrated around the world as International Translation Day. We're very fortunate that some of our wonderful translators and language reviewers shared their thoughts on translation and children's books with us on this occasion.

Picture2.png

A techie turned movie buff, Girish N.R's interests vary from Theatre to Environment, Education to Tourism and writing. He is a passionate supporter of Creative Commons. His views in this article gives a gist on renowned Kannada authors like Shivaram Karanth and Poornachandra Tejaswi’s attempts of writing for children.

ತೇಜಸ್ವಿ ಮತ್ತು ಕಾರಂತರ ನೆಪದಲ್ಲಿ ...  

ಬರಹ: ಗಿರೀಶ್ ಎನ್.ಆರ್.

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬಹಳಷ್ಟು ಪುಸ್ತಕದ ಆರಂಭದಲ್ಲಿ,  ಲೋಹಿಯಾ ಅವರ ತತ್ತ್ವಚಿಂತನೆ, ಕುವೆಂಪು ಅವರ ಕಲಾ ಸೃಷ್ಟಿ ಮತ್ತು ಶಿವರಾಮ ಕಾರಂತರ  ಜೀವನ ದೃಷ್ಟಿ- ಇವುಗಳ ಬಗ್ಗೆ ಉಲ್ಲೇಖಿಸುತ್ತಾರೆ.  ಇಲ್ಲಿ ತತ್ತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ  ಎಂಬ ಪದಗಳ ಆಯ್ಕೆಯೇ ಅದ್ಭುತವಾಗಿದೆ. ತೇಜಸ್ವಿ ಕೂಡ ಈ ಮೂರೂ  ಅಂಶಗಳಲ್ಲಿ ಉನ್ನತಿ ಹೊಂದಲು ಪರಿ ಶ್ರಮಿಸದವರೇ. ಪ್ರಾಯಶಃ ಇದರ ಫಲವಾಗಿಯೇ ಕಾರಂತರು ಮತ್ತು ತೇಜಸ್ವಿ,  ಮಕ್ಕಳ ಜ್ಞಾನದ ತೃಷೆಯನ್ನು ಹೆಚ್ಚಿಸಬಲ್ಲ ಆಸಕ್ತಿ ದಾಯಕ ವಿಷಯಗಳ ಹೊತ್ತ ಕನ್ನಡ ಪುಸ್ತಕಗಳನ್ನು ಹೊರತರುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಶಿವರಾಮ ಕಾರಂತರ "ಬಾಲ ಪ್ರಪಂಚ" ಮತ್ತು ತೇಜಸ್ವಿ ಅವರ "ಮಿಲೆನಿಯಮ್  ಸರಣಿಯ" ಪುಸ್ತಕಗಳನ್ನು ನೆಪವಾಗಿ ಇಟ್ಟುಕೊಂಡು ನಾನಿಲ್ಲಿ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಪ್ರಯತ್ನ ಮಾಡಿದ್ದೇನೆ .

ಶಿವರಾಮ ಕಾರಂತರ  "ಬಾಲ ಪ್ರಪಂಚ" ಮಕ್ಕಳ ವಿಶ್ವಕೋಶದಂತಹ (encyclopedia) ಬೃಹತ್ ಕೆಲಸವನ್ನು ಕನ್ನಡದಲ್ಲಿ ಕೈಗೆತ್ತಿಕೊಂಡ ಮೊದಲ ಪ್ರಯತ್ನ ಇರಬಹದು. (ಮತ್ತು ಕೊನೆ ಪ್ರಯತ್ನ ಕೂಡ ಇರಬಹುದು. ನಾನು ಇತಿಹಾಸಕಾರನಲ್ಲ).  ಇಂತಹ ಕೆಲಸಕ್ಕೆ ಅವರಿಗಾದ  ಆರ್ಥಿಕ ಮುಂಗಟ್ಟಿನ ಕಥೆ ವ್ಯಥೆಗಳು ನಮ್ಮ ಊಹೆಯನ್ನೂ ಮೀರಿದವು. ಆದರೂ ಅವರನ್ನ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಿದ್ದುದೇನು?  ಮಕ್ಕಳ ಮನಸ್ಸಿನ ಹಸಿವನ್ನು ಹೆಚ್ಚಿಸುವ ಮತ್ತು ಮನಸ್ಸನ್ನು ಅರಳಿಸುವ ಪುಸ್ತಕಗಳು ಕನ್ನಡದಲ್ಲೇ ಇರಬೇಕು ಎಂಬುದರ ಬಗ್ಗೆ ಅವರಿಗಿದ್ದ ಪ್ರೀತಿ . ದೇಶದ  ಉದ್ದಗಲವೂ ಪ್ರಯಾಣಿಸಿದ್ದ ಅವರು ಮತ್ತು ದೇಶದ ಬಹುಸಂಖ್ಯಾತ ಮಕ್ಕಳ ಶಿಕ್ಷಣದ ರೀತಿ ನೀತಿಗಳನ್ನ ಅರಿತಿದ್ದ ಅವರು ಮಾತೃಭಾಷೆಯಲ್ಲಿ ವಿಶ್ವಕೋಶದಂತಹ ಪುಸ್ತಕ ತರವುದರ ಅವಶ್ಯಕತೆ ತಿಳಿದಿದ್ದರು. ಕೇವಲ ಮಾತೃ ಭಾಷೆಯಲ್ಲಿ ಬರೆಯುವುದಲ್ಲದೆ ಅದು ಮಕ್ಕಳಿಗೆ ಅನುಕೂಲವಾಗುವಂತೆ ಸರಳವಾಗಿ ಮತ್ತು ಸುಂದರವಾಗಿ ಇರುವಂತೆ ಕೂಡ ಅವರು ಜಾಗ್ರತೆವಹಿಸಿದ್ದಾರೆ. ವಿಶ್ವಕೋಶ ಎಂದಾದ ಮೇಲೆ ವಿಷಯಗಳಿಗೂ ಕೊರತೆಯಿಲ್ಲ . ಅಲ್ಲೂ ಕಾರಂತರು ತೋರಿರುವ ವೈವಿಧ್ಯತೆ ಮತ್ತು ಅಚ್ಚರಿಯ ವಿಷಯಗಳನ್ನು ಮಕ್ಕಳಿಗೆ ತಿಳಿಸಿ ಅವರನ್ನ ಉತ್ತೇಜಿಸ ಬೇಕು ಎಂಬ ಪ್ರಾಮಾಣಿಕತೆ  ಮತ್ತು ಪ್ರೀತಿ "ಬಾಲ ಪ್ರಪಂಚ"ದಲ್ಲಿ ಎದ್ದು ಕಾಣುತ್ತದೆ.

"ಬಾಲ ಪ್ರಪಂಚ" ವಿಶ್ವಕೋಶ ಎಂಬ ಹಣೆಪಟ್ಟಿಯಲ್ಲಿ ಒಂದು ಮಟ್ಟಿಗೆ ಮಾಹಿತಿಯ ಪುಸ್ತಕವಾಗಿ ನಿಲ್ಲುತ್ತದೆ. ಕನ್ನಡದ ಮಟ್ಟಿಗೆ  ಮೊದಲ ಪ್ರಯತ್ನವಾದ (ನಾನು ಇತಿಹಾಸಕಾರನಲ್ಲ) ಇದು ಪುಸ್ತಕದ ಹಿಂದಿನ ಉದ್ದೇಶವನ್ನು ಪೂರ್ಣಗೊಳಿಸುತ್ತದೆ ಕೂಡ.

ತೇಜಸ್ವಿ ಅವರ "ಮಿಲನಿಯಮ್ ಸರಣಿ" ಒಂದು ಮಟ್ಟಿಗೆ "ಬಾಲ ಪ್ರಪಂಚ"ದ ವಿಸ್ತರಣೆ ಎನ್ನಬಹುದು ಕೂಡ. ತೇಜಸ್ವಿ ಅವರು ಇದ್ದಿದ್ದರೆ ನನ್ನ ಈ ಮಾತು ನಿಜ  ಎನ್ನುವಷ್ಟರ ಮಟ್ಟಿಗೆ  "ಮಿಲನಿಯಮ್ ಸರಣಿ" ಬೃಹದಾಕಾರವಾಗಿ ಬೆಳೆಯುತ್ತಿತ್ತೇನೋ? ಅದೇನೇ ಇರಲಿ, "ಮಿಲನಿಯಮ್ ಸರಣಿ" ಹೊರ ಬರಲು ಕೂಡ ತೇಜಸ್ವಿ ಮತ್ತು ಕಾರಂತರಲ್ಲಿ ಇದ್ದ  ತತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ ಸಾಮ್ಯತೆಯೇ ಕಾರಣ. ಮಕ್ಕಳಿಗೆ ಸಿಗುತ್ತಿರುವ ಜಡ ಶಿಕ್ಷಣದ ಕುರಿತು ತೇಜಸ್ವಿ ಅವರ ಅತೃಪ್ತಿ ಅವರ ಬರಹಗಳಲ್ಲಿ   ಗಟ್ಟಿಯಾಗಿಯೇ ವ್ಯಕ್ತವಾಗಿದೆ. ಹಳ್ಳಿಯ ವಾತಾವರಣದಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡ ತೇಜಸ್ವಿ ಅವರು ಆಧುನಿಕತೆ , ಬದಲಾಗುತ್ತಿರುವ ಜ್ಞಾನವ್ಯವಸ್ಥೆ ಮತ್ತು ಶಿಕ್ಷಣದ ರೀತಿ ನೀತಿ, ಆಧುನಿಕ ಭಾರತದ ಆರ್ಥಿಕ  ಮತ್ತು ಸಾಮಾಜಿಕ ವೈರುದ್ಧ್ಯ , ಇವ್ವೆಲವನ್ನ ಹತ್ತಿರದಿಂದ ವಿಶ್ಲೇಷಿಸಿದ್ದರು. ಈ ಹಿನ್ನೆಲೆಯಿಂದಲೇ ಅವರು "ಮಿಲನಿಯಮ್ ಸರಣಿ" ಕೆಲಸದಲ್ಲಿ ತೊಡಗಿಸಿಕೊಂಡರು. "ಮಿಲನಿಯಮ್ ಸರಣಿ" "ಬಾಲ ಪ್ರಪಂಚ"ದ ವಿಸ್ತರಣೆ ಎಂದು ನಾನು ಹೇಳುವಾಗ ವಿಷಯಗಳನ್ನು ಹೇಳುವಲ್ಲಿ "ಮಿಲನಿಯಮ್ ಸರಣಿ"ಯಲ್ಲಾದ ಉತ್ತಮ ಬೆಳವಣಿಗೆ ಕೂಡ ನನ್ನ ಮನಸ್ಸಿನಲ್ಲಿತ್ತು . ನನ್ನ ಪ್ರಕಾರ "ಮಿಲನಿಯಮ್ ಸರಣಿ" ವಿಷಯಗಳನ್ನು ಹೇಳುವ ತಂತ್ರಗಾರಿಕೆ ಮತ್ತು ಭಾಷೆ ಎರಡರಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಉತ್ತಮ ಬೆಳವಣಿಗೆಗೆ ಕಾರಣವೇ ತೇಜಸ್ವಿ ಅವರಿಲ್ಲಿದ್ದ ತುಡಿತ ಮತ್ತು ಪ್ರೀತಿ.

ಈ ಎರಡೂ ಪುಸ್ತಕಗಳ ಪುಟಗಳನ್ನ ಮತ್ತೆ ತಿರುಗಿಸುವಂತೆ ಮಾಡಿದ್ದು ನನ್ನ ಇತ್ತೀಚಿನ ಅನುವಾದದ ಪ್ರಯತ್ನಗಳು. ನನ್ನ ಅನುವಾದದ ಸಮಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಪ್ರಶ್ನೆಗಳ ಸಾಲೇ ಇಲ್ಲಿದೆ -- ನನ್ನ ಅನುವಾದ ಓದುವ ಮಕ್ಕಳ ಆಸಕ್ತಿಯನ್ನ ಕೆರಳಿಸುತ್ತದೆಯೇ? ಅದು ಅವರಿಗೆ ಮುದ ನೀಡುತ್ತದೆಯೇ? ನಾನು ಉಪಯೋಗಿಸುವ ಭಾಷೆ ಸರಳವೂ ಮತ್ತು ಸುಂದರವಾಗಿದೆಯೇ? ನಾನು ಹೇಳುತ್ತಿರುವ ವಿಷಯ ಅನುವಾದದಲ್ಲಿ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆಯೆ ? ನಾನು ತಲುಪಲು ಪ್ರಯತ್ನಿಸುತ್ತಿರುವ ವರ್ಗದ ವಸ್ತು ಸ್ಥಿತಿಯ ಅರಿವು ನನಗಿದೆಯೆ ? ನಾನು ಅನುವಾದ ಮಾಡಲು ಪ್ರಯತ್ನಿಸುತ್ತಿರುವ ವಿಷಯ/ಕತೆ  ನನ್ನ ಭಾಷೆಯ ಅಥವಾ ಸಂಸ್ಕೃತಿಯ ಮಕ್ಕಳಿಗೆ ಹತ್ತಿರವಾಗಬಲ್ಲದೆ ?

ಅನುವಾದಕರು ತಮ್ಮ ಭಾಷೆಯಲ್ಲಿ ಒಂದು ವಿಷಯಕ್ಕೆ ಜೀವ ನೀಡುತ್ತಿರುತ್ತಾರೆ. ಅದು ಅನುವಾದ ಎನ್ನುವುದಕ್ಕಿಂತ ಹೆಚ್ಚಾಗಿ ಅದರ ಉದ್ದೇಶ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ . ನಾವು ಮಾಡುವ ಈ ಅನುವಾದಗಳು/ ಕತೆಗಳು/ವಿಷಯಗಳು ಮಕ್ಕಳ ಮನಸ್ಸನ್ನು ಅರಳಿಸ ಬೇಕೆಂದಿದ್ದಲ್ಲಿ ಕಾರಂತರು ಮತ್ತು ತೇಜಸ್ವಿ ಅವರಿಗಿದ್ದ ಆ ಪ್ರೀತಿ ಮತ್ತು ಕಾಳಜಿಯನ್ನ ರೂಢಿಸಿಕೊಳ್ಳಬೇಕಿದೆ.   ಮೇಲಿನ ಎಲ್ಲ ಪ್ರಶ್ನೆಗಳಿಗೂ ಕೂಡಲೇ ಉತ್ತರ ಸಿಗದೇ ಹೋಗಬಹುದು. ಆದರೆ, ನಮ್ಮಲ್ಲಿನ ಆಶಯ ಮತ್ತು ಪ್ರೀತಿ ಹೇಗೋ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತದೆ.

 

Be the first to comment.